woman-empowerment-essay-in-kannada

ನಮಸ್ಕಾರ ಓದುಗರೇ,

ಈ ಕೆಳಗಿನ ಲೇಖನದಲ್ಲಿ ನಾವು ಮಹಿಳಾ ಸಬಲೀಕರಣ ಪ್ರಬಂಧದ ಬಗ್ಗೆ ತಿಳಿಯೋಣ.

Women Empowerment Essay in Kannada ( mahila sabalikaran essay in kannada ) ಎಂಬ ಈ ಲೇಖನದಲ್ಲಿ ಪೀಠಿಕೆ ಯಿಂದ ಉಪಸಂಹಾರದ ವರೆಗೂ ಎಲ್ಲಾ ಮಾಹಿತಿ ಒಳಗೊಂಡ ಮಹಿಳಾ ಸಬಲೀಕರಣ ನಿಬಂಧವು ಈ ಕೆಳಗೆ ಇದೆ.

ಪೀಠಿಕೆ

“ ತೊಟ್ಟಿಲನ್ನು ತೂಗುವ ಕೈಗಳು ಜಗತ್ತನ್ನೇ ತೂಗುಬಲ್ಲದು”

ಪ್ರಾಚೀನ ಕಾಲದಿಂದಲೂ ಮಹಿಳೆಯೂ ಎಲ್ಲ ರಂಗದಲ್ಲಿಯೂ ಪುರುಷರಿಗೆ ಸರಿಸಮಾನಳು. ಆದರೆ ಆಧುನಿಕತೆಯ ಪರದೆಯಲ್ಲಿ ಮಹಿಳೆಯರನ್ನು ನಾಲ್ಕು ಗೋಡೆಗಳ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಮೂಢನಂಬಿಕೆ, ಸಾಮಾಜಿಕ ಅಸಮಾನತೆ, ಮುಂತಾದವುಗಳನ್ನು ಎದುರಿಸುತ್ತಿದ್ದಾಳೆ. ಆದ್ದರಿಂದ ಮಹಿಳೆಯರಿಗೆ ಉತ್ತಮ ಸ್ಥಾನಮಾನವನ್ನು ಕಲ್ಪಿಸಿ ಕೊಡುವುದು ಪ್ರಸ್ತುತ ಶತಮಾನದ ಅಗತ್ಯ ಮತ್ತು ಅನಿವಾರ್ಯವಾದ ಸಂಗತಿ.

ವಿಷಯ ವಿವರಣೆ

ಅರ್ಥ :

“ಮಹಿಳೆಯರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಿಕೀಯವಾಗಿ, ಶೈಕ್ಷಣಿಕವಾಗಿ, ಬೌದ್ಧಿಕವಾಗಿ ಮತ್ತು ಇತರೆ ಕ್ಷೇತ್ರಗಳಲ್ಲಿ ಅಧಿಕಾರ ನೀಡುವ ಮೂಲಕ ಸ್ತ್ರೀ – ಪುರುಷರನ್ನದೇ ಸಮಾನತೆಯಿಂದ ಕಾಣುವುದೇ ಮಹಿಳಾ ಸಬಲೀಕರಣವಾಗಿದೆ.”

ಭಾರತದಲ್ಲಿ ‘ರಾಜಾರಾಮ ಮೋಹನರಾಯ’ ರವರು ತನ್ನ ಅಣ್ಣನ ಹೆಂಡತಿಯಾದ ‘ಅಲೋಕ ಸುಂದರಿ’ಯ ಸತಿಪದ್ಧತಿಯ ವಿರುದ್ಧ ಹೋರಾಡಿ ಮಹಿಳಾ ಸಬಲೀಕರಣಕ್ಕೆ ಅಡಿಪಾಯ ಹಾಕಿದರು. ಆದರೆ ಇದೇ ವೇಳೆಯಲ್ಲಿ ಮಹಿಳಾ ಸಬಲೀಕರಣ ಪ್ರಾರಂಭವಾಯಿತು ಎಂದು ಹೇಳುವದು ಕಷ್ಟಸಾಧ್ಯ. ಏಕೆಂದರೆ, ಹಂತ – ಹಂತವಾಗಿ ಮಹಿಳೆ ಸಬಲವಾಗಿದ್ದರೂ ಸಹ ಸಂಪೂರ್ಣವಾಗಿ ಸಬಲೆ ಅಲ್ಲ. ಏಕೆಂದರೆ, ಅದು ಕೆಲವೊಂದು ತೊಡಕುಗಳನ್ನು ಒಳಗೊಂಡಿದೆ.

Women Empowerment Essay in Kannada
Women Empowerment Essay in Kannada

ಭಾರತವು ಆಧುನಿಕವಾಗಿ ಎಷ್ಟೇ ಮುಂದೆವರೆದರೂ ಸಹ ಹಲವಾರು ಸಾಮಾಜಿಕ ಸಂಪ್ರದಾಯಗಳು ಮಹಿಳೆಯರನ್ನ ಕಗ್ಗತ್ತಲ ಕೋಣೆಗೆ ತಳ್ಳಿವೆ. ಅದರಲ್ಲಿ ಪ್ರಮುಖವಾಗಿ ಸತಿಸಹಗಮನ ಪದ್ದತಿ, ಬಾಲ್ಯವಿವಾಹ, ವರದಕ್ಷಿಣೆ, ಬಡತನ, ಅನಕ್ಷರತೆ, ದೇವದಾಸಿ ಪದ್ದತಿ, ವಿಧವಾ ಪುನರ್‌ವಿವಾಹ ನಿಷೇಧ, ಬಲತ್ಕಾರ, ಅತ್ಯಾಚಾರ, ಲಿಂಗಭೇದ, ದೈಹಿಕ ಮತ್ತು ಮಾನಸಿಕ ದೌರ್ಜನ್ಯ ಇಂತಹ ಹಲವಾರು ಕೃತ್ಯಗಳು ಭಾರತೀಯ ಸ್ತ್ರೀ ಸಂಕುಲವನ್ನು ಬಾಧಿಸುತ್ತಿದೆ. ಅಷ್ಟೇ ಅಲ್ಲದೇ ತಮ್ಮ ಕಾಲಿನ ಮೇಲೆ ತಾವು ನಿಲ್ಲಲು ಮತ್ತು ತಮ್ಮ ಜೀವನವನ್ನು ಯಾರ ಸಹಾಯವಿಲ್ಲದೇ ಸಾಗಿಸಲು ಮಹಿಳೆಯು ಹೆದರುತ್ತಿದ್ದಾಳೆ.

ಮಹಿಳೆಯರಿಗಾಗಿ ಭಾರತದ ಸಂವಿಧಾನದ ನಿಭಂದನೆಗಳು :

ಭಾರತೀಯ ಸಂವಿಧಾನದ ಕಲಂ 14, 15, 16, ರ ಪ್ರಕಾರ ಮೂಲಭೂತ ಹಕ್ಕುಗಳ ವಿಚಾರದಲ್ಲಿ ಲಿಂಗ ತಾರತಮ್ಯ ಮಾಡಬಾರದು.

ವಿಧಿ 39 ರ ಪ್ರಕಾರ ಮಹಿಳೆಯರಿಗೆ ರಾಜ್ಯದಿಂದ ಸ್ತ್ರೀ – ಪುರುಷ ಎಂದು ಯಾವುದೇ ರೀತಿಯ ತಾರತಮ್ಯವಿರಕೂಡದು, ವಿಧಿ 39(B) ಸಮಾನ ಕೆಲಸಕ್ಕೆ ಸಮಾನ ವೇತನ, ಮತ್ತು ವಿಧಿ 42 ರ ಪ್ರಕಾರ ಮಹಿಳೆಯರಿಗಾಗಿ ಹೆರಿಗೆ ರಜೆಗಳನ್ನು ನೀಡುವದು ಮತು ಉತ್ತಮ ಕೆಲಸದ ವಾತಾವರಣವನ್ನು ಕಲ್ಪಿಸಿಕೊಡುವುದು ಮತ್ತು ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಒದಗಿಸಿಕೊಡುವುದು.

ಮಹಿಳಯರ ಸಾಧನೆಗಳು :

ಒಲಂಪಿಕ್ಸ ಕ್ರೀಡಾಕೂಟದಲ್ಲಿ ‘ಭಾರ ಎತ್ತುವಿಕೆ’ಯ ವಿಭಾಗದಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ‘ಕರ್ಣಂಮಲ್ಲೇಶ್ವರಿ’. ಅದೇ ರೀತಿಯಾಗಿ ಪಿ.ವ್ಹಿ.ಸಿಂಧೂ ಬ್ಯಾಡ್ಮಿಂಟನನಲ್ಲಿ ಮತ್ತು ಸಾಕ್ಷಿ ಮಲ್ಲಿಕ್ ಕುಸ್ತಿಯಲ್ಲಿ ಸಾಧನೆ ಗೈದಿದ್ದಾರೆ. ಅಷ್ಟೇ ಅಲ್ಲದೇ ತಾನು ಸ್ವತಃ ಅಂಗವಿಕಲೆ ಎಂದು ಗೊತ್ತಿದ್ದರು ಸಹ ಮಹಿಳೆಯರು ಕ್ರೀಡೆಯಲ್ಲಿ ಸಾಧನೆ ಗೈಯ್ಯುವದನ್ನು ನಾವು ಕಾಣಬಹುದಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧ ಪಟ್ಟಂತೆ 403 ದಿನಗಳ ಕಾಲ ಅಂಟಾರ್ಟಿಕಾದಲ್ಲಿದ್ದ ಇಸ್ರೋದ ಮಂಗಳಮುಖಿ ಪ್ರಪಂಚದ ಪ್ರಥಮ ಮಹಿಳೆ ಎಂಬ ಹೆಗ್ಗಲಿಕೆಗೆ ಪಾತ್ರಳಾಗಿದ್ದಾಳೆ. ಭಾರತದ ಮೊದಲ ಗಗನಯಾತ್ರಿ ‘ಕಲ್ಪನಾ ಚಾವ್ಲಾ’, ಪ್ರಪಂಚದ ಮೊಸಲ ಗಗನಯಾತ್ರಿ ‘ಯೂರಿ ಗಗರಿನ’, ಭಾರತದ ಕ್ಷಿಪಣಿ ಮಹಿಳೆ ಎಂದೇ ಹೆಸರುವಾಸಿಯಾಗಿದ್ದ ‘ಟೆಸ್ಸಿ ಥಾಮಸ್’, ರ ಸಾಧನೆಯೂ ತುಂಬಾ ಮೌಲ್ಯಾಧಾರಿತವಾದದ್ದೂ ಎಂದೂ ನೆನಯಬಹುದಾಗಿದೆ.

ಅಷ್ಟೇ ಅಲ್ಲದೇ ತನ್ನ ಕೊನೆಯ ಉಸಿರು ಇರುವ ತನಕ ತನ್ನ ನಾಡಿಗಾಗಿ ಹೋರಾಡಿ ವೀರಮರಣವನ್ನು ಹೊಂದಿದಂತಹ ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಮತ್ತು ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಮುಂತಾದವುವರುಗಳು ಸಾಧನೆ ಅಚ್ಛಳಿಯದ ಸಾಧನೆಗಳಾಗಿವೆ.

ಚಿತ್ರರಂಗದಲ್ಲಾಗಲೀ, ರಾಜಕೀಯದಲ್ಲಿಯಾಗಲೀ, ವೈದ್ಯಕೀಯದಲ್ಲಾಗಲೀ, ಮತ್ತು ಹಲವಾರು ರಂಗಗಳಲ್ಲಿ ಮಹಿಳೆಯು ಸಾಧನೆಗೈದಿದ್ದಾಳೆ.

ಮಹಿಳಾ ಸಬಲೀಕರಣದಲ್ಲಿ ಸರಕಾರದ ಪಾತ್ರ :

1992 ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ರಚನೆ.

1996 ರ ಮಾರ್ಚ್ 8 ರಂದು ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಗಳ ಸುಧಾರಣೆಗೆ ಸ್ಥಾಯಿ ಸಮಿತಿಯ ರಚನೆ.

1999 ರಲ್ಲಿ ಮಹಿಳೆಯರಿಗಾಗಿ ಸ್ವಸಹಾಯ ಗುಂಪುಗಳ ರಚನೆ.

2001ನೇ ವರ್ಷವನ್ನು ಮಹಿಳಾ ಸಬಲೀಕರಣ ವರ್ಷವೆಂದು ಆಚರಣೆ.

ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಜನನಿ ಸುರಕ್ಷಾ ಯೋಜನೆ,ಮೈತ್ರಿ ಯೋಜನೆ, ಮನಸ್ವಿನಿ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ.

ಇದೇ ರೀತಿ ಸರ್ಕಾರವು ಹಲವಾರು ಯೋಜನೆಗಳನ್ನು ಮಹಿಳೆಯ ಆರ್ಥಿಕ ಸಬಲೀಕರಣಕ್ಕೆ ಜಾರಿಗೆ ತಂದಿದೆ.

ಕಾನೂನು ಕ್ರಮಗಳು:

IPC ಯ ಕಲಂ 376 ಹೆಣ್ಣು ಅತ್ಯಾಚಾರಕ್ಕೆ ಶಿಕ್ಷೆಯನ್ನು ನೀಡುವುದು. IPC ಕಲಂ 365 ರಿಂದ 373 ರ ವರೆಗೆ ಹೆಣ್ಣು ಅಪಹರಣ ಮತ್ತು ಹೆಣ್ಣನ್ನು ದುರ್ಬಳಕೆಗೆ ಬಳಸಿಕೊಂಡರೆ ಅದಕ್ಕೆ ಶಿಕ್ಷೆ.

IPC ಕಲಂ 498 (A) ಕಲಮಿನ ಪ್ರಕಾರ ಮದುವೆಯಾದ ಹೆಣ್ಣು ಮಗಳಿಗೆ ಕೌರ್ಯ ಅಂದರೆ ಕಿರುಕುಳವನ್ನು ನೀಡಿದ್ದರೇ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.

ವರದಕ್ಷಿಣೆ ಕಿರುಕುಳವನ್ನು ನೀಡಕೂಡದು ಅಷ್ಟೇ ಅಲ್ಲದೆ ಇಂತಹ ಹಲವಾರು ಕಾಯ್ದೆಗಳು ಮತ್ತು ನಿಯಮಗಳು ಮಹಿಳೆಯರ ಶೋಷಣೆ ಮತ್ತು ದೌರ್ಜನ್ಯದ ವಿರುದ್ಧವಾಗಿ ಜಾರಿಗೆ ಬಂದಿವೆ.

ಆದರೆ ಅವುಗಳ ಸದುಪಯೋಗ ನಮ್ಮ ಜನ ಸಾಮಾನ್ಯರು ಪಡೆದುಕೊಳ್ಳುತ್ತಿಲ್ಲ ಅಷ್ಟೇ ಅವರಿಗೆ ಅವುಗಳ ಪ್ರಜ್ಞೆಯೂ ಇಲ್ಲದಿರಬಹುದು ಅಥವಾ ಸಮಾಜದ ಅಂಜಿಕೆ ಆಗಿರಬಹುದು.

ಪ್ರತಿಯೊಬ್ಬ ವ್ಯಕ್ತಿಯು ಮಹಿಳೆಯರನ್ನು ಗೌರವಿಸಬೇಕು ಒಬ್ಬ ಪುರುಷನು ಒಂದು ಮಹಿಳೆಯನ್ನು ತಾಯಿಯಾಗಿ ತಂಗಿಯಾಗಿ ಮತ್ತು ಮಡದಿಯಾಗಿ ಸ್ವೀಕರಿಸುತ್ತಾರೆ ಆದರೆ ಮಗಳಾಗಿ ಸ್ವೀಕರಿಸುವುದಿಲ್ಲ ಏಕೆ?

ತನ್ನ ತಾಯಿ ತನ್ನ ತಂಗಿ ಮತ್ತು ಮಡದಿಯನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತಾನೆ ಆದರೆ ಹೆಣ್ಣಿನ ಮೇಲೆ ದೌರ್ಜನ್ಯ ಎಸಗುತ್ತಾನೆ ಏಕೆ? ಅವಳು ಕೂಡ ಒಂದು ಹೆಣ್ಣಲ್ಲವೇ ಅವಳು ಕೂಡ ಹಬ್ಬನ ತಾಯಿ ತಂಗಿ ಮತ್ತು ಮಡದಿಯಾಗಿರುತ್ತಾಳೆ ಎಲ್ಲವೇ?

ಮಾರ್ಚ್ 8 ರಂದು ನಾವು ಅಂತರಾಷ್ಟ್ರೀಯ ಮಹಿಳಾ ದಿನ ವನ್ನಾಗಿ ಆಚರಿಸುತ್ತೇವೆ ಮಹಿಳೆಯ ಸಬಲೀಕರಣದ ಬಗ್ಗೆ ಅವಳ ಗೌರವದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಮಾಡುತ್ತೇವೆ ಆದರೆ ಆ ಮಾತುಗಳು ಕೇವಲ ಆ ದಿನ ಮಾತ್ರ ಸೀಮಿತವಾಗಿರದೆ ಪ್ರತಿದಿನವೂ ಅದನ್ನು ಬಳಕೆ ಮಾಡಬೇಕು ಮಹಿಳೆಯೂ ಸಂಪೂರ್ಣವಾಗಿ ಸಬಲೆ ಯು ಅಲ್ಲ ಅಬಲೆಯು ಮಧ್ಯಯುಗದ ಭಾರತವನ್ನು ಹೋಲಿಸಿ ನೋಡಿದಾಗ ಈಗಿನ ಭಾರತದಲ್ಲಿ ಪುರುಷರು ಮಹಿಳೆಯನ್ನು ಗೌರವಿಸುವುದು ಮತ್ತು ಪ್ರೋತ್ಸಾಹಿಸುವುದು ನಾವು ಕಾಣಬಹುದು.

ಉಪಸಂಹಾರ

ಒಟ್ಟಾರೆಯಾಗಿ ಹೇಳಬೇಕೆಂದರೆ ಮಹಿಳಾ ಸಬಲೀಕರಣದಲ್ಲಿ ಸರಕಾರದ ಜವಾಬ್ದಾರಿ ಎಷ್ಟು ಇದೆಯೋ ಅಷ್ಟು ಪುರುಷರ ಜವಾಬ್ದಾರಿಯೂ ಇದೆ ಮಹಿಳೆ ಅಬಲೆ ಅಲ್ಲ ಸಬಲೆ ಎಂಬುದನ್ನು ಎತ್ತಿಹಿಡಿಯಬೇಕು ತೊಟ್ಟಿಲನ್ನು ತೂಗುವ ಕೈಯೊಂದು ಜಗತ್ತನ್ನು ತೂಗಬಲ್ಲದು ಎಂಬ ಮಾತು ಸತ್ಯ ಒಂದು ಜಗತ್ತನ್ನು ಆಡುವ ಶಕ್ತಿ ಮಹಿಳೆಗಿದೆ ಎಲ್ಲಿ ಸ್ತ್ರೀ-ಪುರುಷರಿಗೆ ಸಮಾನತೆ ನೀಡಲಾಗುತ್ತದೆಯೇ ಅಲ್ಲಿ ಮಹಿಳೆಯು ಸಬಲ ಆಗಿರುವುದು ಖಚಿತ ಮಹಿಳೆ ಎಲ್ಲಿ ಸಬಲಲಾಗಿರುತ್ತಾಳೋ ಆ ದೇಶದ ಅಭಿವೃದ್ಧಿ ಖಚಿತ.

Leave a Reply

Your email address will not be published. Required fields are marked *