free-borewell-under-ganga-kalyan-scheme

ನಮಸ್ಕಾರ ಓದುಗರೇ,

ಕರ್ನಾಟಕ ಸರ್ಕಾರವು ಸವಿತಾ ಸಮಾಜ ಅಭಿವೃದ್ಧಿ ನಿಗಮ ಮತ್ತು ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ( ಹಿಂದುಳಿದ ವರ್ಗಗಳ ಪ್ರವರ್ಗ 2-ಎ ) ಕಡೆಯಿಂದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಉಚಿತ ಬೋರ್ವೆಲ್ ಕೊರೆಸಲು ಅರ್ಜಿಯನ್ನು ಆನ್ಲೈನ್ ಮುಖಾಂತರ ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಗಂಗಾ ಕಲ್ಯಾಣ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು.

  • ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಒಳಪಡುವ ಸವಿತಾ ಮತ್ತು ಇದರ ಉಪಜಾತಿಗಳಿಗೆ ಮತ್ತು ಮಡಿವಾಳ ಮಾಚಿದೇವ ಮತ್ತು ಇದರ ಉಪಜಾತಿಗಳಿಗೆ ( ಹಿಂದುಳಿದ ವರ್ಗಗಳ ಪ್ರವರ್ಗ 2-ಎ ) ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದು ಹಾಲಿ ಜಮೀನುಗಳು ಖಷ್ಠಿಯಾಗಿದ್ದು ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿರಬಾರದು.
  • ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 98,000/- ಹಾಗೂ ಪಟ್ಟಣ ಪ್ರದೇಶದವರಿಗೆ ರೂ. 1,20,000/-ಗಳ ಒಳಗಿರಬೇಕು.
  • ಅರ್ಜಿದಾರರು ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಕನಿಷ್ಠ 02 ಎಕರೆ ಜಮೀನು ಹೊಂದಿರಬೇಕು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 01 ಎಕರೆ ಜಮೀನು ಹೊಂದಿರಬೇಕು.
  • ವೈಯಕ್ತಿಕ ಕೊಳವೆ ಬಾವಿ ಯೋಜನೆಯಲ್ಲಿ ಘಟಕ ವೆಚ್ಚ ರೂ. 2.50 ಲಕ್ಷಗಳು, ಇದರಲ್ಲಿ ರೂ. 2.00 ಲಕ್ಷ ಸಹಾಯಧನ ಹಾಗೂ ರೂ. 50,000/- ನಿಗಮದಿಂದ ಶೇ.4ರ ಬಡ್ಡಿದರದಲ್ಲಿ ನೀಡುವ ಸಾಲದ ಮೊತ್ತ ಒಳಗೊಂಡಿದೆ.
  • ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಿಗೆ ವೈಯಕ್ತಿಕ ಕೊಳವೆ ಬಾವಿ ಘಟಕ ವೆಚ್ಚ ರೂ. 4.00ಲಕ್ಷಗಳು ಇದರಲ್ಲಿ ರೂ. 3.50ಲಕ್ಷ ಸಹಾಯಧನ ಹಾಗೂ ರೂ. 50,000/- ನಿಗಮದಿಂದ ಶೇ. 4ರ ಬಡ್ಡಿದರದಲ್ಲಿ ನೀಡುವ ಸಾಲದ ಮೊತ್ತ ಒಳಗೊಂಡಿದೆ.

ರೈತರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್‌ನಲ್ಲಿರುವಂತೆ ರೈತರ ಹೆಸರು, (ಶ್ರೀ/ಶ್ರೀಮತಿ, ಕುಮಾರಿ ಮುಂತಾದ ಮಾಹಿತಿಗಳೆಲ್ಲವು) ಬ್ಯಾಂಕ್ ಖಾತೆಯ ಪುಸ್ತಕದಲ್ಲಿಯೂ ಇದ್ದು, ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿಯೂ ಆಧಾರ್ ಕಾರ್ಡ್‌ನಲ್ಲಿರುವಂತೆ ಹೆಸರು ಹೊಂದಾಣಿಕೆಯಾಗಬೇಕು.

free-borewell-under-ganga-kalyan-scheme
Free Borewell Under Ganga Kalyan Scheme

ಅರ್ಜಿ ಸಲ್ಲಿಸುವು ವಿಧಾನ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ ಆನ್ಲೈನ್ ಅರ್ಜಿ ಫಾರ್ಮನ್ನು ತುಂಬಬೇಕು. ತದನಂತರ ನಿಮ್ಮ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಮೇಲಿನ ನಿಗಮಗಳ ಕಚೇರಿಗೆ ಹೋಗಿ ಎಲ್ಲ ದಾಖಲಾತಿಯ ಜೊತೆಗೆ ಆನ್ಲೈನ್ ತುಂಬಿರುವ ಅರ್ಜಿ ಫಾರ್ಮ್ ಅನ್ನು ಲಗತ್ತಿಸಬೇಕಾಗುತ್ತದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 03/03/2023.

ಸೇವಾ ಸಿಂಧು ಪೋರ್ಟಲ್: https://sevasindhuservices.karnataka.gov.in/

ಇದನ್ನು ಓದಿ: PM ಕಿಸಾನ್ ನ 13ನೇ ಕಂತು ಬಂತಾ ನೀವೇ ನೋಡಿ. ಇಲ್ಲಿದೆ ಸಂಪೂರ್ಣ ಮಾಹಿತಿ

ಅಧಿಕೃತ ಮಾಹಿತಿ

ಈ ಮೇಲಿನ ಯೋಜನೆಯ ಅಧಿಕೃತ ಮತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ವೆಬ್ಸೈಟ್ ಮತ್ತು ಸಹಾಯವಾಣಿಯನ್ನು ಸಂಪರ್ಕಿಸಬಹುದು

ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ:

ವೆಬ್ಸೈಟ್https://kssd.karnataka.gov.in/ ,

ಸಹಾಯವಾಣಿ– 080-22374832, 8050773004, 7090400100, 7090400900

ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ:

ವೆಬ್ಸೈಟ್https://kmmd.karnataka.gov.in/

ಸಹಾಯವಾಣಿ– 080-22374832, 8050773004, 7090400100, 7090400900

One thought on “ಈ ಜಾತಿಯವರಿಗೆ ಸಿಗಲಿದೆ ಉಚಿತ ಬೋರ್ವೆಲ್, ಗಂಗಾ ಕಲ್ಯಾಣ್ ಯೋಜನೆ ಅಡಿಯಲ್ಲಿ ಮಾರ್ಚ್ 3 ರ ಒಳಗೆ ಅರ್ಜಿ ಸಲ್ಲಿಸಿ.”

Leave a Reply

Your email address will not be published. Required fields are marked *