ಟಿವಿ ಪರ್ಸನಾಲಿಟಿ ಮತ್ತು ಭಾರತೀಯ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಅವರ ಪತ್ನಿಯು ಆದಂತಹ ಸಂಜನಾ ಗಣೇಶನ್ ಅವರು ಐಸಿಸಿ ಮಹಿಳಾ T20 ವಿಶ್ವಕಪ್ 2023 ಅನ್ನು ಕವರ್ ಮಾಡಲು ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದಾರೆ. ಶುಕ್ರವಾರ, ಫೆಬ್ರವರಿ 12 ರಂದು, ಸಂಜನಾ ತನ್ನ ಮೊದಲ ವೀಡಿಯೊವನ್ನು ಚಿತ್ರೀಕರಿಸಿದರು.
ಈಗ ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿ ಸಂಜನಾ ತನ್ನ ಮೊದಲ ವೀಡಿಯೊಗಾಗಿ ಹಾಟ್ ಆಫ್ ಶೋಲ್ಡರ್ ಡ್ರೆಸ್ (black off-shoulder dress) ಅನ್ನು ಧರಿಸಿದ್ದು ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ICC ವೀಡಿಯೋ ತಂಡದ ಭಾಗವಾಗಿರುವ ಸಂಜನಾ ಅವರು ಪ್ರತಿ ಪಂದ್ಯದ ಮಾಹಿತಿಯನ್ನು ಪಡೆಯಲು ಮತ್ತು ಪ್ರಸ್ತುತ ಆಟದ ಬಗ್ಗೆ ಆಟಗಾರರು ಮತ್ತು ಮಾಜಿ ಕ್ರಿಕೆಟಿಗರ ಆಲೋಚನೆಗಳನ್ನು ಪಡೆಯಲು ಅವರನ್ನು ಸಂದರ್ಶಿಸುತ್ತಾರೆ ಮತ್ತು ICC ಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ನಿರೂಪಕಿಯಾಗಿ – ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಚಾನಲ್‌ಗಳಿಗೆ ಅತ್ಯಾಕರ್ಷಕ ಕ್ರಿಕೆಟ್ ಗೆ ಸಂಭಂದಿಸಿದ ಸುದ್ದಿಗಳನ್ನು ಕೊಡುತ್ತಾರೆ.
ಕೆಳಗಿನ ಸಂಜನಾ ಗಣೇಶನ್ ಅವರ ಸುಂದರ ಫೋಟೋಗಳನ್ನು ನೋಡಿ:
all my feelings about today, summarised in one picture 🌞 pic.twitter.com/xVm1Ov3d58
— Sanjana Ganesan (@SanjanaGanesan) February 10, 2023
ಐಪಿಎಲ್ (IPL) 2013-14ರ ಸೀಜನ್ ನಲ್ಲಿ ಸಂಜನಾ ಅವರು ಜಸ್ಪ್ರೀತ್ ಬುಮ್ರಾ ಅವರನ್ನು ಸಂದರ್ಶಿಸಬೇಕಾದರೆ ಅವರನ್ನು ಮೊದಲು ಭೇಟಿಯಾಗಿದ್ದರು ಅದಾದ ಮೇಲೆ 2019 ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ ನಲ್ಲಿ ಇವರಿಬ್ಬರು ಪರಸ್ಪರವಾಗಿ ಇನ್ನಷ್ಟು ಹತ್ತಿರವಾಗಿ ಪ್ರೀತಿ ಬೆಳೆಯಿತು ತದನಂತರ ಈ ಪ್ರೀತಿಯು ಮದುವೆಯ ರೂಪವನ್ನು ಪಡೆಯಿತು. 2021 ಗೋವಾದಲ್ಲಿ ಅದ್ದೂರಿಯಾಗಿ ಬುಮ್ರಾ ಮತ್ತು ಸಂಜನಾ ಅವರು ಇಬ್ಬರು ವಿವಾಹವನ್ನು ಆದರು.