ನಮಸ್ಕಾರ ಓದುಗರೇ, ಭಾರತ ದೇಶದಲ್ಲಿ ಬಡತನ ಎನ್ನುವುದು ಸರ್ವೆ ಸಾಮಾನ್ಯ. ಇತಿಹಾಸದಲ್ಲಿ ಭಾರತವು ಒಂದು ಬಂಗಾರದ ನಕ್ಷತ್ರವಾಗಿತ್ತು ಆದರೆ ಸ್ವತಂತ್ರ ಸಿಗುವ ಮಟ್ಟಿಗೆ ಭಾರತವು ಬಡತನದ ಮೋಡದೊಳಗೆ ಮುಸುಕಿ ಹೋಗಿತ್ತು. ಈ ಬಡತನವನ್ನು ಹೋಗಲಾಡಿಸಲು ಸರ್ಕಾರಗಳು ತಮ್ಮ ಪ್ರಯತ್ನವನ್ನು ಮಾಡುತ್ತಲೇ ಇವೆ.
ಕಾಲಕಾಲಕ್ಕೆ ಬಂದಂತ ಹಲವಾರು ಸರ್ಕಾರಗಳು ತಮ್ಮ ಸರ್ಕಾರದ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ ಅದು ಗರಿಬ್ ಹಠಾವೋ ದಿಂದ ಅಂತೋದಯದವರೆಗೂ ಹತ್ತಾರು ಯೋಜನೆಗಳಿವೆ. ಅವುಗಳಲ್ಲಿ ಅಕ್ರಮ ಸಕ್ರಮ ಯೋಜನೆಯು ಒಂದು.

ಅಕ್ರಮ ಸಕ್ರಮ ಯೋಜನೆಯು ರಾಜ್ಯ ಸರ್ಕಾರದ ಮೂಲಕ ಕಂದಾಯ ಇಲಾಖೆಯ ಅಡಿಯಲ್ಲಿ ಹೊರಡಿಸಲಾದ ಒಂದು ಯೋಜನೆಯಾಗಿದ್ದು ಇದರಲ್ಲಿ ಯಾವ ಬಡ ಜನರು ಮತ್ತು ಬಡ ರೈತರು ಸರ್ಕಾರಿ ಜಮೀನಿನಲ್ಲಿ ಅಥವಾ ಜಾಗದಲ್ಲಿ ಮನೆಯನ್ನು ಕಟ್ಟಿಕೊಂಡು ಇರುತ್ತಾರೆ ಹಾಗೂ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುತ್ತಾರೋ ಅಂತಹ ಬಡ ಜನರಿಗೆ ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ಅಡಿಯಲ್ಲಿ ಅಂತಹ ಅಕ್ರಮವಾಗಿ ವಾಸಿಸುತ್ತಿರುವ ಜನರಿಗೆ ಅವರ ಹೆಸರಿನಲ್ಲಿ ಹಕ್ಕುಪತ್ರವನ್ನು ಒದಗಿಸುವ ಕಾರ್ಯ ವನ್ನು ಮಾಡುತ್ತದೆ. ಈ ಯೋಜನೆ ಮೂಲಕ ಬಡವರು ಅಕ್ರಮ ಆಸ್ತಿಯನ್ನು ಸಕ್ರಮ ಆಸ್ತಿಯನ್ನಾಗಿ ಮಾಡಿಕೊಳ್ಳ ಬಹುದಾಗಿದೆ.
ಈಗಾಗಲೇ ಕಂದಾಯ ಸಚಿವರಾದ ಆರ್ ಅಶೋಕ್ ರವರು ಮನೆ ಇಲ್ಲದವರಿಗೆ ಮನೆಯನ್ನು ಕೊಡುವ ಘೋಷಣೆಯನ್ನು ಮಾಡಿದ್ದಾರೆ. ಯಾರು ಸರ್ಕಾರಿ ಜಮೀನು ಮತ್ತು ಜಾಗದಲ್ಲಿ ಈಗಾಗಲೇ ಮನೆಯನ್ನು ಕಟ್ಟಿಕೊಂಡು ಸುಮಾರು ವರ್ಷಗಳಿಂದ ವಾಸಿಸುತ್ತಿರುತ್ತಾರೆ ಅಂತಹ ಬಡ ಜನರು 94ಸಿ ಮತ್ತು 94ಸಿಸಿ ( 94 C & 94 CC Form) ಫಾರ್ಮ್ ಅನ್ನು ತುಂಬುವ ಮೂಲಕ ಕಂದಾಯ ಇಲಾಖೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಅಗತ್ಯ ದಾಖಲಾತಿಯೊಂದಿಗೆ ಜಿಲ್ಲಾ/ತಾಲೂಕಾ/ಹೋಬಳಿ ಕಂದಾಯ ಇಲಾಖೆಗೆ ಕೊಡಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ವ್ಯಾಪ್ತಿಯ ಕಂದಾಯ ಇಲಾಖೆಯನ್ನು ಸಂಪರ್ಕಿಸಿ ಅಲ್ಲಿ ತಹಶೀಲ್ದಾರ್ ಅಥವಾ ಉಪತಹಸೀಲ್ದಾರ್ ಅವರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯುವ ಮೂಲಕ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಿ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಫಲಾನುಭವಿಗಳು ತಮ್ಮ ಹೆಸರಿನಲ್ಲಿ ಯಾವುದೇ ರೀತಿಯ ಜಮೀನು ಅಥವಾ ಜಾಗವನ್ನು ಹೊಂದಿರಬಾರದು.
ಈ ಮೇಲಿನ ಲೇಖನವು ತಮಗೆ ಉಪಯುಕ್ತ ಮಾಹಿತಿ ಎಂದು ಅನಿಸಿದರೆ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಸೇರಿ ಮತ್ತು ಈ ಲೇಖನವನ್ನು ಶೇರ್ ಮಾಡಿ.
I want free house in our village.
[…] ಇದನ್ನೂ ಓದಿ: ಮನೆ ಇಲ್ಲದವರಿಗೆ ಉಚಿತ ಮನೆ, ಕಂದಾಯ ಸಚಿವ ಆರ… […]