ನಮಸ್ಕಾರ ಓದುಗರೇ, ಕರ್ನಾಟಕ ಸರ್ಕಾರದಿಂದ ರೈತರಿಗೆ ಒಂದು ಗುಡ್ ನ್ಯೂಸ್ ಬಂದಿದೆ ಅದು ಏನು ಎನ್ನುವುದನ್ನು ತಿಳಿಯೋಣ ಬನ್ನಿ.
ನೇರವಾಗಿ ಹೇಳಬೇಕೆಂದರೆ ಇದು ರೈತರಿಗೆ ಉಚಿತವಾಗಿ ವಿದ್ಯುತ್ ಕೊಡುವುದನ್ನು ವಿಸ್ತರಣೆ ಮಾಡುವುದಾಗಿದೆ. ಎಲ್ಲರಿಗೂ ತಿಳಿದಿರುವ ಹಾಗೆ ರಾಜ್ಯ ಸರ್ಕಾರವು ರೈತರಿಗೆ 6 ರಿಂದ 7 ಗಂಟೆಗಳ ಕಾಲ ನೀರಾವರಿ ಬೆಳೆಯನ್ನು ಬೆಳೆಯಲು ಉಚಿತವಾಗಿ ವಿದ್ಯುತ್ ಅನ್ನು ಪೂರೈಸುತ್ತಿದೆ.ಆದರೇ ಇದು ಬೇಸಿಗೆ ಕಾಲದಲ್ಲಿ ಸಲುತ್ತಿಲ್ಲ ಹಲವಾರು ರೈತರು ನೀರಿನ ಸೌಲಭ್ಯ ಇದ್ದರು ವಿದ್ಯುತ್ತಿನ ಅಭಾವದಿಂದಾಗಿ ತನ್ನ ಜಮೀನನ್ನು ಉಳುಮೆ ಮಾಡದೆ ಹಾಗೆ ಬಿಟ್ಟಿದ್ದಾರೆ.

ಈ ಸಮಸ್ಸೆಯನ್ನು ಗಮನಕ್ಕೆ ತೆಗೆದುಕೊಂಡ ರಾಜ್ಯ ಸರ್ಕಾರವು ವಿದ್ಯುತ್ ವಿತರಣೆ ಕಾಲವನ್ನು 7 (ತಾಸು) ಗಂಟೆ ಯಿಂದ 10 (ತಾಸು) ಗಂಟೆಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಇಂಧನ ಸಚಿವರಾದ ಸುನಿಲ್ ಕುಮಾರ್ ಅವರು ಒಂದು ಉದ್ಘಾಟನಾ ಸಮಾರಂಭದಲ್ಲಿ ಘೋಷಣೆ ಮಾಡಿದ್ದಾರೆ.
ಸರ್ಕಾರವು ಚುನಾವಣೆಗೆ ಮುಂಚಿತವಾಗಿ ಈ ಒಂದು ಸೌಲಭ್ಯವನ್ನು ರೈತರಿಗೆ ಒದಗಿಸುತ್ತದೆ ಎಂದು ಹೇಳಬಹುದು.
ನಾವು ಬರೆದಿರುವ ಉಚಿತ ವಿದ್ಯುತ್ ವಿಸ್ತರಣಾ ಲೇಖನವು ತಮಗೆ ಇಷ್ಟ ವಾದರೆ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜೋಯ್ನ್ ಆಗಿ.