ನಮಸ್ಕಾರ ಸ್ನೇಹಿತರೆ, ಇಂದಿನ ಈ ಲೇಖನದಲ್ಲಿ ಡಿಜಿಟಲ್ ವೋಟರ್ ಐಡಿ ಕಾರ್ಡ್ ಕಡ್ಡಾಯವೇ? ಎನ್ನುವ ಪ್ರಶ್ನೆಗೆ ಉತ್ತರ ನೋಡೋಣ.
ಚುನಾವಣೆ ಸಮೀಪ ಬಂದಂತೆ ಚುನಾವಣಾ ಆಯೋಗವು ತನ್ನ ನಿಯಮಗಳಲ್ಲಿ ಬದಲಾವಣೆಗಳನ್ನು ತರಲು ಶುರುಮಾಡುತ್ತದೆ. ಹಾಗೂ ಜನರ ಹಿತಾಸಕ್ತಿಗಳನ್ನು ನೋಡಿಕೊಂಡು ಬದಲಾವಣೆಗಳನ್ನು ಮಾಡುತ್ತದೆ.

ಇದೀಗ ಡಿಜಿಟಲ್ ವೋಟರ್ ಐಡಿ ಕಾರ್ಡ್ ಕಡ್ಡಾಯವೇ ಎನ್ನುವ ಪ್ರಶ್ನೆ ಜನರಲ್ಲಿ ಮೂಡಿಬರುತ್ತಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ಡಿಜಿಟಲ್ ವೋಟರ್ ಐಡಿ ಕಾರ್ಡ್ ಕಡ್ಡಾಯವೆಂದು ಸುಳ್ಳು ವದಂತಿ ಹರಡಲಾಗುತ್ತಿದ್ದು ಇದರ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ದೊರೆತಿಲ್ಲ.
ಡಿಜಿಟಲ್ ವೋಟರ್ ಐಡಿ ಕಾರ್ಡ್ ಕಡ್ಡಾಯವಾಗಿಲ್ಲ ನಿಮ್ಮ ಬಳಿ ಹಳೆಯ ವೋಟರ್ ಐಡಿ ಕಾರ್ಡ್ ಇದ್ದರೆ ಸಾಕು ನೀವು ಬರುವ ಚುನಾವಣೆಯಲ್ಲಿ ಮತ ಚಲಾಯಿಸಬಹುದಾಗಿದೆ.
ಇದನ್ನೂ ಓದಿ: ಮನೆ ಇಲ್ಲದವರಿಗೆ ಉಚಿತ ಮನೆ, ಕಂದಾಯ ಸಚಿವ ಆರ್ ಅಶೋಕ್ ಘೋಷಣೆ. ಏನಿದು ಅಕ್ರಮ ಸಕ್ರಮ ಯೋಜನೆ?
ಆದರೆ ನಿಮ್ಮ ಹಳೆಯ ವೋಟರ್ ಐಡಿ ಕಾರ್ಡ್ ಕಳೆದು ಹೋಗಿದ್ದರೆ ಅಥವಾ ತುಂಬಾ ಹಳೆಯದಾಗಿದ್ದರೆ ಅಥವಾ ನೀವು ವೋಟರ್ ಐಡಿ ಕಾರ್ಡ್ ಮಾಡಿಸದೆ ಇದ್ದಲ್ಲಿ ಚುನಾವಣಾ ಆಯೋಗವು ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಹೊಸ ಅರ್ಜಿ ಮತ್ತು ಹಳೆಯ ವೋಟರ್ ಐಡಿ ಕಾರ್ಡ್ ಸಂಖ್ಯೆ ಇದ್ದಲ್ಲಿ ಅದರ ಡಿಜಿಟಲ್ ಪ್ರತಿಗಾಗಿ ಅರ್ಜಿ ಸಲ್ಲಿಸು ಅವಕಾಶವನ್ನು ಕಲ್ಪಿಸಿದೆ.
ಡಿಜಿಟಲ್ ವೋಟರ್ ಐಡಿ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಮೊಬೈಲ್ ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಅಂಚೆ ಮೂಲಕ ತಮ್ಮ ಮನೆಗೆ ಡಿಜಿಟಲ್ ವೋಟರ್ ಐಡಿ ಕಾರ್ಡ್ ಬಂದು ತಲುಪುತ್ತದೆ ಬರೆದೆದ್ದಲ್ಲಿ ನಿಮ್ಮ ತಾಲೂಕ ಚುನಾವಣಾ ಅಧಿಕಾರಿಯನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು.
ಆನ್ಲೈನ್ ನಲ್ಲಿ ಅರ್ಜಿ ಹಾಕಲು ತೊಂದರೆ ಉಂಟಾದಲ್ಲಿ ಪ್ರತಿ ಗ್ರಾಮ, ಹೋಬಳಿ ಮತ್ತು ತಾಲೂಕುಗಳಲ್ಲಿ ಚುನಾವಣಾ ಆಯೋಗದಿಂದ ನೇಮಿಸಲಾದ ಅಧಿಕಾರಿಯು ಇರುತ್ತಾರೆ ಅವರನ್ನು ಭೇಟಿಯಾಗಿ ನಿಮ್ಮ ದಾಖಲಾತಿಗಳನ್ನು ಲಗತ್ತಿಸಿ ವೋಟರ್ ಐಡಿ ಕಾರ್ಡ್ ಅನ್ನು ಪಡೆಯಬಹುದಾಗಿದೆ.
ಡಿಜಿಟಲ್ ವೋಟರ್ ಐಡಿ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
- ಆಧಾರ್ ಕಾರ್ಡ್
- ಫೋಟೋ ( ಆನ್ಲೈನ್ ನಲ್ಲಿ ಆದರೆ ಒಂದು ಸ್ಕ್ಯಾನ್ ಫೋಟೋ ಹಾಗೂ ಆಫ್ಲೈನ್ ಆದಲ್ಲಿ ಎರಡು ಫೋಟೋಗಳು)
- ಬಿಳಿಯ ಹಳೆಯ ಮೇಲೆ ಸಿಗ್ನೇಚರ್ (ಹಸ್ತಾಕ್ಷರ)
- ನಿಮ್ಮ ತಂದೆ, ತಾಯಿ, ಸಹೋದರ, ಸಹೋದರಿ ಅಥವಾ ನಿಮ್ಮ ಯಾವುದೇ ಸಂಬಂಧಿಕರ ವೋಟರ್ ಐಡಿ ಕಾರ್ಡ್ ನ ಪ್ರತಿ.
ಈ ಮೇಲಿನ ಲೇಖನವು ನಿಮಗೆ ಇಷ್ಟವಾದಲ್ಲಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜೋಯ್ನ್ ಆಗಿ ಮತ್ತು ಇಂತಹ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವುದನ್ನು ಮರೆಯಬೇಡಿ.
[…] […]